Wednesday, November 12, 2008

::apara::: ಅಂತಿಮ ಮೂವತ್ತು

::apara::: ಅಂತಿಮ ಮೂವತ್ತು

nanna prakara aneka ondhakkondhu chennagive adaralli 6 12 maththu 26 chennagive

Friday, May 9, 2008

ಅಂತರಂಗದ ಆಪ್ತಸ್ವರ

ವಿನಂತಿ
ಪ್ರಾಣದ ಪ್ರಾಣವಾದವಳೇಕನಸಲ್ಲಿ ಬಂದು ಕೊಲ್ಲುವವಳೇನೆನಪಾಗಿ ಕಾಡೋದಕ್ಕಿಂತಾಮಾಡ್ಕೊಳ್ಳೇ ನನ್ನೇ ನೀ ಸ್ವಂತಾ

ಸ್ಫೂರ್ತಿ
ಮಾಡಿಲ್ಲ ಕವನ ಪೂರ್ತಿ ಎಲ್ಲಿ ಮರೆಯಾದೇ ನೀ ಸ್ಫೂರ್ತಿಕನಸಲ್ಲಾದ್ರೂ ಒಂದು ಸರ್ತಿಕಾಯ್ತೀನಿ ಬಾರೇ ಮಾರಾಯ್ತಿ

ಒಲವಿನ ಚಿಲುಮೆ
ಹೇಗೆ ತಿಳಿಯಿತು ನನ್ನ ಮನದ ಪ್ರೀತಿಬೇಗ ಕಲಿಸಿಕೊಡು ಮನಗೆಲ್ಲುವ ರೀತಿಹೇಗೆ ಓದುವುದು ಕಣ್ಣೋಟದಾ ಸಂಚುಎಂತು ಗುರುತಿಸುವುದು ಪ್ರೀತಿಯ ಸುಳಿಮಿಂಚುತಿಳಿಸಿ ಹೇಳುವೆಯಾ ಪ್ರೀತಿ ಗೆಲ್ಲೋ ಕಲೆಬಿಡಿಸಿ ತೋರುವೆಯಾ ಪ್ರೀತಿ ಉಕ್ಕೋ ಸೆಲೆ

ಸಂ-ವೇದನೆ
ಕಣ್ಣಿನ ಭಾಷೆ ಕಲಿತುಕೋ ಗೆಳತಿಕೇಳಿಸಿಕೋ ಈ ಮೌನದ ವಿನತಿಹೃದಯ ಸಂವೇದನೆಯ ಮಾತಲಿ ಹೇಳೋದು ಹ್ಯಾಗೆಅರಿವಾಗಬೇಕು ನಿನಗೇ ಗೊತ್ತಾಗದ ಹಾಗೆನೀರೆ... ನೀಯಾರೇ...ಸಪ್ತವರ್ಣದ ರಂಗುರಂಗಲಿಸುಪ್ತವಾಗಿಹೆಯಾ ನೀನು ರಂಗೋಲಿಲುಪ್ತವಾಗಿಹ ಹೊನಲ ಸೆಲೆಯಲಿಗುಪ್ತಗಮನದಿ ಹರಿವ ಹೊಳೆಯೇ ನೀವ್ಯಕ್ತವಾಗದ ಮನದ ನುಡಿಯಲಿಅವ್ಯಕ್ತವಾಗಿಹ ಯಾವ ಪದವೇ ನೀಸಪ್ತಸ್ವರಗಳ ಲಯದ ಮಿಡಿತದಿಆಪ್ತವಾಗುವ ಸ್ವರದ ಪಲುಕೇ ನೀಸುರಿವ ಸ್ವಾತಿಮಳೆ ಧಾರೆಯಲಿಮುತ್ತಾದ ಮೊದಲ ಮಳೆ ಹನಿಯೇ ನೀಮಿನುಗೋ ತಾರಾಗಣದ ನಡುವಲಿಮೆರೆಯೋ ಪೌರ್ಣಿಮೆ ಶಶಿಯೇ ನೀಬಣ್ಣಬಣ್ಣದ ಹೂಗಳ ನಡುವಲಿಭಿನ್ನವಾಗುಳಿವ ಸುಮವೇ ನೀಮೊದಲ ಮಳೆಯ ಹನಿಗೆ ಹೊಮ್ಮುವಮಣ್ಣಕಣದ ಘಮಲು ಘಮವೇ ನೀತೊದಲ ನುಡಿ ನುಡಿಯೋ ಹಸುಳೆಯತುಟಿಯಂಚಿನ ಮುಗ್ಧ ನಗುವೇ ನೀಮಾಯಾಲೋಕದ ಮಾಯಕದಿ ನನ್ನಮರುಳಾಗಿಸಿದ ಮಾನಿನಿಯೇ ಹೇಳುಮನುಷ್ಯ ಸಂಬಂಧದ ನವ್ಯ ಪರಿಭಾಷೆಯೇ ನೀ

ಜಾನಪದ

ಪ್ರಾಣಿವರ್ಗದಿಂದ ಪ್ರತ್ಯೇಕಗೊಂಡ ನಂತರ ಮಾನವ ತನ್ನ ಅಗತ್ಯಕ್ಕನುಗುಣವಾಗಿ ಭಾಷೆಯನ್ನು ಯಾವಾಗ ಬಳಕೆಗೆ ತಂದುಕೊಂಡನೋ ಅಂದಿನಿಂದಲೇ ತನ್ನ ಭಾವನಗಳನ್ನು ಕಾವ್ಯಮಯವಾಗಿ ಅಭಿವ್ಯಕ್ತಿಸುವುದನ್ನು ಕಲಿತಿದ್ದಾನೆ. ಯಾಕೆಂದರೆ ಪ್ರಾರಂಭಿಕ ಹಂತದಲ್ಲಿ ಮಾನವ ಆಡುತ್ತಿದ್ದ ಮಾತುಗಳು ಕಾವ್ಯಮಯವಾಗಿತ್ತೆಂದೇ ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಮನುಷ್ಯ ಭಾವನಾತ್ಮಕ ಒತ್ತಡಗಳಿಗೆ ಸಿಲುಕಿಕೊಂಡ ಸಂದರ್ಭದಲ್ಲಿ ವ್ಯಕ್ತಪಡಿಸುವ ಒಳಗಿನ ತುಡಿತಗಳು ಕಾವ್ಯದ ಸ್ಪರ್ಶ ಪಡೆದೇ ಹೊರಬರುತ್ತವೆ. ಭೂಮಿಯ ಮೇಲೆ ಅವತರಿಸಿದ ಮೊದಲ ಮಾನವರಿಗೂ, ಪ್ರಪಂಚವನ್ನು ವಿಸ್ಮಯದ ಕಣ್ಣುಗಳಿಂದ ಅವಲೋಕಿಸಿ ಅರ್ಥಮಾಡಿಕೊಳ್ಳಬಯಸುವ ಮುಗ್ಧ ಮಗುವಿಗೂ ಅಷ್ಟೇನೂ ವ್ಯತ್ಯಾಸವಿರದು. ಭಾವನೆಗಳ ಅಭಿವ್ಯಕ್ತಿಗೆ ಹಿನ್ನೆಲಯೊದಗಿಸುವುದು ವ್ಯಕ್ತಿಯ ಹೊಸ ಅನುಭವ, ಅವನ ರಾಗ-ದ್ವೇಷ, ನೋವು-ನಲಿವು ಇತ್ಯಾದಿಗಳು ಪ್ರಪಂಚದ ಯಾವುದೇ ಮೂಲೆಯಲ್ಲಿ, ಯಾವುದೇ ಬುಡಕಟ್ಟಿನಲ್ಲಿ, ಯಾವುದೇ ಸಂಸ್ಕೃತಿಯಲ್ಲಿ, ಯಾವುದೇ ಪರಿಸರದಲ್ಲಿ ಬದುಕುತ್ತಿರುವ ಜನಾಂಗವಾಗಿದ್ದರೂ ಈ ತೆರನಾದ ಅನುಭವಗಳನ್ನು ಹಾಡಾಗಿ ಹೊರಹೊಮ್ಮಿಸಿರುವುದು ಕಂಡುಬರುತ್ತದೆ. ತೀವ್ರವಾದ ಭಾವನೆಗಳನ್ನು ಆಯಾ ಕ್ಷಣದಲ್ಲಿ ಹೊರಹಾಕುವುದಕ್ಕೂ ಪರಿಚತ ಲಯವೊಂದರಲ್ಲಿ ಅಂತರಂಗದ ಮರ್ಮಗಳನ್ನು ತೋಡಿಕೊಳ್ಳುವುದಕ್ಕೂ, ಯಾವುದೇ ಸಂಗತಿಯನ್ನು ಅಪ್ರಜ್ಞಾಪೂರ್ವಕವಾಗಿ ಕೈಬಿಡುವ-ಸೇರಿಕೊಳ್ಳುವ ಅನುಕೂಲವಿದ್ದುದಕ್ಕೂ ಬಹಳ ಆಶ್ಚರ್ಯವೆನಿಸುವಂತೆ ಜನಪದ ಸಾಹಿತ್ಯದಲ್ಲಿರುವ ಗದ್ಯಭಾಗಕ್ಕಿಂತ ಪದ್ಯಭಾಗದ ಸಂಖ್ಯೆಯೇ ಹೆಚ್ಚಾಗಿದೆ. ಅನಕ್ಷರಸ್ಥ ಜನಸಮುದಾಯದ ಆಸ್ತಿಯಾಗಿರುವ ಈ ಜನಪದ ಗೀತೆಗಳು ಶತಶತಮಾನಗಳಿಂದ ನೆನಪಿನ ತಳಹದಿಯಾಗಿ ಉಳಿದು ಬೆಳೆದುಬಂದಿರುವ ರೀತಿಯೇ ಅತ್ಯಂತ ವಿಸ್ಮಯಕಾರಿಯಾಗಿದೆ. ಪ್ರತಿಭಾಸಂಪನ್ನವಾದ ಭಾವತೀವ್ರತೆಯೇ ಜನಪದ ಗೀತೆಗಳ ಮೂಲಸತ್ವವಾಗಿದ್ದು ಇವುಗಳನ್ನು ರಚಿಸುವ, ಹಾಡುವ, ಬೋಧಿಸುವ ಯಾವ ಕ್ರಮಬದ್ಧತಂತ್ರವೂ ಬಳಕೆಯಲ್ಲಿಲ್ಲ. ಕೇಳುವುದರಿಂದ ನೆನಪಿಟ್ಟುಕೊಳ್ಳುವುದರಿಂದ, ಹಾಡುವವರೊಂದಿಗೆ ಧ್ವನಿಗೂಡಿಸುವುದರಿಂದಲೇ ಜನಪದಗೀತೆಗಳನ್ನು ಕಲಿಯಬೇಕಾಗುತ್ತದೆ. ಈ ಮಾದರಿಯಲ್ಲೇ ಅವು ತಲೆಮಾರಿನಿಂದ ತಲೆಮಾರಿಗೆ ಜೀವಂತವಾಗಿ ಉಳಿದುಕೊಂಡು ಬಂದಿವೆ. ಈ ಹಾಡುಗಳ ಸೃಷ್ಟಿಗೆ ಜನಪದದ ಕ್ರಿಯಾತ್ಮಕತೆಯೇ ಬಹು ಮೂಲಭೂತವಾದ ಕಾರಣ. ನಿರ್ದಿಷ್ಟ ಸಂದರ್ಭಗಳಲ್ಲಿ ಬಳಕೆಯಾಗುವ ಜನಪದ ಗೀತೆಗಳು ಸಾಮೂಹಿಕ ಉದ್ದೇಶಗಳನ್ನು ಈಡೇರಿಸುವ ಕಾರಣದಿಂದಾಗಿ ಸಮಾಜ ಜೀವನದಲ್ಲಿ ಹಾಸುಹೊಕ್ಕಾಗಿವೆ. ವ್ಯಕ್ತಿ ಜೀವನದ ನಿರ್ಣಾಯಕ ಘಟ್ಟಗಳೆನಿಸಿದ ಬಾಲ್ಯ, ಯೌವನ, ಮದುವೆ, ಸಾವು ಇಂಥ ಸಂದರ್ಭಗಳಲ್ಲಿ ಕಾಣಿಸಿಕೊಳ್ಳುವ ಆಚರಣೆಗಳಿಗೆ ಹಿನ್ನೆಲೆಯಾಗಿ ಹಾಡುಗಳು ಇದ್ದೇ ಇರುತ್ತವೆ. ಸೃಷ್ಟಿ ಕಾಯಕದ ಎಲ್ಲ ಸಂದರ್ಭಗಳಲ್ಲೂ ಹಾಡುವ ಪರಿಪಾಠ ಬೆಳೆದು ಬಂದಿದೆ, ಮನೆಯೊಳಗೇ ಹಾಡಿಕೊಳ್ಳಬಹುದಾದವುಗಳಲ್ಲಿ ಬೀಸೋ ಕಲ್ಲಿನ ಪದಗಳು, ಕುಟ್ಟುವ ಸಂದರ್ಭದ ಹಾಡುಗಳು ಪ್ರಸಿದ್ಧವಾಗಿವೆ. ದೇವರ ಕಲ್ಪನೆ ಜನಪದರ ಬದುಕಿನ ಅನಿವಾರ್ಯ ಭಾಗವಾಗಿದೆ. ಕೌಟುಂಬಿಕ ಬಾಂಧವ್ಯಗಳನ್ನು ಬಿತ್ತರಿಸುವ, ಗೃಹಜೀವನದ ಕಷ್ಟಸುಖಗಳನ್ನು ಬಿಂಬಿಸುವ ಹಾಡುಗಳಂತೂ ಹೃದಯಂಗಮವಾಗಿವೆ. ಕೆಲವು ಹಬ್ಬಗಳಲ್ಲೂ, ಮದುವೆಗಳಲ್ಲೂ ಹಾಡುವ ಹಾಸ್ಯಲೇಪಿತ ಶೃಂಗಾರ ಗೀತೆಗಳಿವೆ. ಮನುಷ್ಯನ ಅನುಭವಕ್ಕೆ ಎಟುಕುವ ಎಲ್ಲ ವಿಷಯಗಳನ್ನು ಕುರಿತಂತೆಯೂ ರಚನೆಯಾಗಿರುವ ಜನಪದ ಗೀತೆಗಳು ನಂಬಿಕೆ, ಸಂಪ್ರದಾಯ ನೀತಿ ಧರ್ಮ ಇತ್ಯಾದಿಗಳೆಲ್ಲ ನಮ್ಮ ಸಂಸ್ಕೃತಿಯಲ್ಲಿ ಹೇಗೆ ಪ್ರವಹಿಸುತ್ತಿವೆಯೆಂಬುದನ್ನು ಪರಿಚಯಿಸುವ ಸಾಧನಗಳಾಗಿವೆ. ನಮ್ಮ ಪೂರ್ವಜರ ಆಲೋಚನಾ ವಿಧಾನಕ್ಕೆ ಹಿಡಿದ ಕನ್ನಡಿಗಳಾಗಿವೆ.ಜಾನಪದ ಅಧ್ಯಯನದ ಬಹುಮುಖ್ಯ ಭಾಗವೇ ಸಂಸ್ಕೃತಿಯನ್ನೊಳಗೊಳ್ಳುವುದರಿಂದ ಅದನ್ನು ವಿಶ್ಲೇಷಣೆಗೊಳಪಡಿಸುವ ಸಂದರ್ಭದಲ್ಲಿ ?ಜಾತಿ?ಯನ್ನು ಹೊರತುಪಡಿಸುವುದು ಸಾಧ್ಯವೇ ಇಲ್ಲ. ಜಾತಿಗೂ ಸಂಸ್ಕೃತಿಗೂ ಜಾನಪದಕ್ಕು ಒಂದರಿಂದ ಮತ್ತೊಂದನ್ನು ಬೇರ್ಪಡಿಸಲಾಗದಂತಹ ಅನ್ಯೋನ್ಯತೆಯಿರುವ ಕಾರಣದಿಂದಾಗ ಜಾತಿಯ ಅಧ್ಯಯನಕ್ಕೆ ತೊಡಗುವಾಗ ಜಾನಪದವನ್ನು ಪರಿಗಣಿಸುವುದು ಅನಿವಾರ್ಯವಾಗಿರುತ್ತದೆ. ಜಾನಪದದ ಸ್ವರೂಪ, ಲಕ್ಷಣಗಳು ಮೇಲ್ನೋಟಕ್ಕೆ ಎಲ್ಲ ದೇಶಗಳಲ್ಲಿ ಎಲ್ಲ ಸಂಸ್ಕೃತಿಗಳಲ್ಲಿ ಒಂದೇ ತೆರೆನಾಗಿರುವಂತೆ ಕಂಡುಬಂದರೂ ನಮ್ಮ ಅಧ್ಯಯನ ಸೂಕ್ಷ್ಮವಾಗುತ್ತ ಹೋದಂತೆ ಆಯಾ ಪರಿಸರ, ಆಯಾ ಭಾಷೆ, ಆಯಾ ಸಂಸ್ಕೃತಿ, ಆಯಾ ಧರ್ಮ, ಆಯಾ ಜಾತಿ, ಜಾತಿಯಲ್ಲಿರಬಹುದಾದ ಉಪ ಪಂಗಡಗಳು ಇವುಗಳಲ್ಲಿ ಕಂಡುಬರುವ ಆಚರನೆ, ಸಂಪ್ರದಾಯ, ನಂಬಿಕೆ, ಹಬ್ಬ ಹರಿದಿನಗಳು, ಜಾತ್ರೆ ಉತ್ಸವಗಳು, ವ್ಯವಹಾರಗಳು, ರೀತಿ ನೀತಿಗಳು, ನಿಷಿದ್ಧಗಳು, ವೇಷಭೂಷಣಗಳು, ಊಟೋಪಚಾರಗಳು, ಆಟಪಾಠಗಳು, ಮಾನವೀಯ ಸಂಬಂಧಗಳಲ್ಲಿ ಎದ್ದುಕಾಣುವ ವ್ಯತ್ಯಾಸಗಳನ್ನು ಗುರುತಿಸುವುದಕ್ಕೆ ಸಾಧ್ಯವಿದೆ.ಪ್ರತಿಯೊಂದು ಜಾತಿಯವರೂ ಹೀಗೆ ಒಂದಿಲ್ಲೊಂದು ರೀತಿಯಲ್ಲಿ ತಮ್ಮ ಜಾತಿಯ ಮೇಲ್ಮೆಯನ್ನು ಪ್ರಸ್ತುತಪಡಿಸಲೆತ್ನಿಸುವುದೇ ಜಾತಿಯ ವಿಶಿಷ್ಟ ಅಂಶಗಳಲ್ಲಿ ಅಥವಾ ಲಕ್ಷಣಗಳಲ್ಲಿ ಒಂದಾಗಿದೆ. ಆಯಾ ಜಾತಿಯವರು ತಮ್ಮ ತಮ್ಮ ವೈಶಿಷ್ಟ್ಯವನ್ನು ತೋರಿಸಿಕೊಳ್ಳಬಯಸುವುದೇ ಆಯಾ ಗುಂಪುಗಳಲ್ಲಿ ಚಾಲನೆಯಲ್ಲಿರುವ ಆಚರಣೆ, ನಂಬಿಕೆ, ಸಂಪ್ರದಾಯ ಇತ್ಯಾದಿಗಳ ಮೂಲಕ. ಇವೆಲ್ಲ ಬೇರೆಬೇರೆ ಜಾತಿಗಳಿಗೆ ಸಂಬಂಧಿಸಿದಂತೆ ಬಹು ಸೂಕ್ಷ್ಮಸ್ತರದಲ್ಲಿ ಪರಸ್ಪರ ಪ್ರತ್ಯೇಕತೆಯನ್ನು ಪಡೆದುಕೊಂಡಿರುವುದೂ ಉಂಟು. ಉದಾಹರಣೆಗಾಗಿ ದೇವರ ಪದಗಳನ್ನು ವಿಶ್ಲೇಷಣೆ ಮಾಡಿನೋಡಿದರೆ ಇವುಗಳನ್ನು ಹಾಡುವ ಕ್ರಮ ಎಲ್ಲ ಜಾತಿಗಳಲ್ಲೂ ಇದೆಯಾದರೂ ಒಕ್ಕಲಿಗರು ಹಾಡುವ ದೇವರ ಪದಗಳೂ, ಒಕ್ಕಲಿಗೇತರರು ಹಾಡುವ ದೇವರ ಪದಗಳೂ, ಪರಸ್ಪರ ಒಂದೇ ಆಗಿರುವುದಿಲ್ಲ. ಬಹು ಹಿಂದಿನ ಒಕ್ಕಲಿಗ ಜನಾಂಗದಲ್ಲಿ ಯಾವ ದೇವರನ್ನು ಕುರಿತ ಪೂಜೆ ಪುನಸ್ಕಾರ ಮೆರವಣಿಗೆ ಇತ್ಯಾದಿಗಳು ಚಾಲ್ತಿಯಲ್ಲಿದೆಯೋ ಅವುಗಳನ್ನು ಕುರಿತ ಹಾಡುಗಳನ್ನಷ್ಟೇ ಅವರು ಹಾಡುವ ಸಂಪ್ರದಾಯವಿರುತ್ತದೆ. ಹಾಗೆಯೇ ಮದುವೆ ಶಾಸ್ತ್ರದ ಸಂದರ್ಭದಲ್ಲಿನ ಹಾಡುಗಳಿಗೂ ಆಯಾ ಜನಾಂಗದಲ್ಲಿರುವ ಮದುವೆ ಶಾಸ್ತ್ರಗಳಿಗೂ ಪರಸ್ಪರ ಸಂಬಂಧವಿದ್ದೇ ಇರುತ್ತದೆ. ಯಾವುದೋ ಜಾತಿಯವರ ಆಚರಣೆಯ ಸಂದರ್ಭದ ಹಾಡುಗಳನ್ನು ಇನ್ನಾವುದೋ ಜಾತಿಯ ಆಚರಣೆಯಲ್ಲಿ ಹಾಡಿದರೆ ಹಾಡು ಮತ್ತು ಕ್ರಿಯೆ ಪರಸ್ಪರ ಬೆರೆಯದೆ ಅಭಾಸವಾಗುತ್ತದೆ. ಒಂದು ಜನತೆಯ ಸಂಸ್ಕೃತಿಯನ್ನು ಅದರ ಸಾಮಾಜಿಕ, ಧಾರ್ಮಿಕ, ಭಾಷಿಕ ಹಾಗೂ ಪಾರಂಪರಿಕ ಚಟುವಟಿಕೆಗಳ ಅಧ್ಯಯನದಿಂದ ತಿಳಿದುಕೊಳ್ಳಬಹುದಾಗಿರುತ್ತದೆ. ಅನಕ್ಷರಸ್ಥ ಜನಸಮುದಾಯ, ವಾಚಕ ಪರಂಪರೆಯ ಮೂಲಕವೇ ಜೀವನದ ಎಲ್ಲ ಪಾಠಗಳನ್ನು ಕಲಿಯುವ ಕಲಿಸುವ ಸಂಪ್ರದಾಯವುಳ್ಳವರಾದ್ದರಿಂದ ಅವರು ರೂಢಿಸಿಕೊಂಡಿರುವ ಜನಪದ ಸಾಹಿತ್ಯವೇ ಅವರ ಜೀವನದ ನಾನಾ ಮಗ್ಗುಲುಗಳ ಪರಿಚಯ ಮಾಡಿಕೊಂಡಿರುತ್ತದೆ. ಹೀಗೆಯೇ ಕರ್ನಾಟಕದಾದ್ಯಂತ ಇರುವ ಒಕ್ಕಲಿಗ ಜನಾಂಗದ ಒಳಪಂಗಡಗಳೂ ಪ್ರಾದೇಶಿಕ ವ್ಯತ್ಯಾಸದಿಂದ ಮೊದಲುಗೊಂಡು ಅವರವರ ಜೀವನ ಪದ್ಧತಿಗನುಗುಣವಾಗಿ ಬೇರೆ ಬೇರೆ ರೀತಿಯ ಆಚರಣೆಗಳನ್ನೇ ಪಾಲಿಸಿಕೊಂಡು ಬಂದಿರುತ್ತಾರೆ. ಹುಟ್ಟು, ಮದುವೆ, ಮೈನೆರೆಯುವುದು, ಸಾವು ಇಂಥ ಬದುಕಿನ ಬಹುಮುಖ್ಯ ಘಟ್ಟಗಳಲ್ಲಿನ ಆಚರಣೆಗಳಲ್ಲೂ ಗಂಗಡಿಕಾರ ಒಕ್ಕಲಿಗರಲ್ಲಿ ಎದ್ದು ಕಾಣುವಂಥ ವೈಶಿಷ್ಟ್ಯವಿದೆ. ಈ ವೈಶಿಷ್ಟ್ಯದ ವಿವರಣೆಯೇ ಈ ಅಧ್ಯಾಯದ ಮುಖ್ಯ ಉದ್ದೇಶ. ಜನಪದ ಸಾಹಿತ್ಯದ ಮುಖ್ಯವಾಹಿನಿಯಾಗಿರುವ ಜನಪದಗೀತೆ ಆಯಾ ಜನಪದರ ಸಂಸ್ಕೃತಿಯನ್ನು ಚೆನ್ನಾಗಿ ತೆರೆದು ತೋರುತ್ತದೆ. ಆನಪದರು ತಮ್ಮ ಬದುಕಿನ ಬವಣೆಗಳನ್ನು, ಜೀವನಾದರ್ಶಗಳನ್ನು ವಿಶೇಷವಾಗಿ ಜನಪದಗೀತೆಗಳಲ್ಲಿಯೇ ತೋಡಿಕೊಂಡಿದ್ದಾರೆ. ವಿಶ್ವದಾದ್ಯಂತ ಇರುವ ಜನಪದ ಸಮಾಜಗಳಲ್ಲಿ ಪ್ರಣಯ, ಮದುವೆ, ಜನನ, ಮರಣಗಳನ್ನು ಕುರಿತಂತೆ ಹುಟ್ಟಿರುವ ಅಸಂಖ್ಯಾತ ಜನಪದಗೀತೆಗಳಿವೆ, ಇವುಗಳ ಜೊತೆಗೆ ಕೆಲಸದ ಹಾಡುಗಳು, ಹಬ್ಬ ಹರಿದಿನಗಳನ್ನು ಕುರಿತ ಹಾಡುಗಳು ಸಾಕಷ್ಟು ಚಾಲ್ತಿಯಲ್ಲಿವೆ.